ಶ್ರೀ ತ್ಯಾಗರಾಜ ಕರ್ನಾಟಕ ಸಂಗೀತದಲ್ಲಿ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ) ಮಹೇಶ್ ಮಹದೇವ್ ಸೃ‍‌ಷ್ಟಿಸಿರುವ ಒಂದು ರಾಗವಾಗಿದೆ ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 59ನೇ ಮೇಳಕರ್ತ ರಾಗ ಧರ್ಮಾವತಿಯ ಜನ್ಯವಾಗಿದ್ದು ಇದು ಔಡವ-ಷಾಡವ ರಾಗವಾಗಿದೆ. == ರಾಗ ಸ್ವರೂಪ ಮತ್ತು ಲಕ್ಷಣ == ಶ್ರೀ ತ್ಯಾಗರಾಜ ರಾಗವು ಔಡವ-ಷಾಡವ ರಾಗವಾಗಿದ್ದು ಇದರ ಆರೋಹಣದಲ್ಲಿ ಷಡ್ಜ, ಸಾಧಾರಣ ಗಾಂಧಾರ, ಪ್ರತಿ ಮಧ್ಯಮ, ಪಂಚಮ, ಕಾಕಲಿ ನಿಷಾದವಿದೆ. ಅವರೋಹಣದಲ್ಲಿ ಮಾತ್ರ ಚತುಶ್ರುತಿ ರಿಷಭದ ಪ್ರಯೋಗವಿರುತ್ತದೆ. ಈ ರಾಗದ ಆರೋಹಣ ಮತ್ತು ಅವರೋಹಣ ಕೆಳಕಂಡಂತಿದೆ. ಆರೋಹಣ ಸ ಗ2 ಮ2 ಪ ನಿ3 ಸ ಅವರೋಹಣ ಸ ನಿ3 ಪ ಮ2 ಗ2 ರಿ2 ಸ ಆರೋಹಣದಲ್ಲಿ ಐದು ಸ್ವರ ಹಾಗೂ ಅವರೋಹಣದಲ್ಲಿ ಏಳೂ ಸ್ವರಗಳು ಇರುವುದರಿಂದ ಇದು ಔಡವ-ಷಾಡವ ರಾಗವಾಗಿದೆ. == ಸಂಗೀತ ರಚನೆ == ಈ ರಾಗವು ಹೊಸರಾಗವಾಗಿದ್ದು ಮಹೇಶ್ ಮಹದೇವ್ ಈ ರಾಗದಲ್ಲಿ ಮೊದಲಿಗೆ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ಆದಿ ತಾಳದಲ್ಲಿ ರಚಿಸಿದ್ದಾರೆ. ಪ್ರಿಯದರ್ಶಿನಿ ಈ ಕೃತಿಯನ್ನು ಹಾಡಿದ್ದು ಕೃತಿಯ ಬಿಡುಗಡೆಯನ್ನು ತ್ಯಾಗರಾಜರ ಜೀವ ಸಮಾಧಿಯಾದ ಸ್ಥಳದಲ್ಲಿ ನಡೆಯುವ 176ನೇ ತ್ಯಾಗರಾಜ ಆರಾಧನಾ ಮಹೋತ್ಸವ, ತಿರುವಯ್ಯರು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಾಯಿತು. == ಕೃತಿಯ ಸಾಹಿತ್ಯ == ಮಹೇಶ್ ಮಹದೇವ್ ಶ್ರೀಸ್ಕಂದ ಎಂಬ ಅಂಕಿತ ನಾಮದೊಂದಿಗೆ ಈ ರಾಗದಲ್ಲಿ ರಚಿಸಿದ "ಶ್ರೀ ರಾಮಚಂದ್ರಂ ಭಜಾಮಿ" ಕೃತಿಯ ಸಾಹಿತ್ಯ ಪಲ್ಲವಿ: ಶ್ರೀ ರಾಮಚಂದ್ರಂ ಭಜಾಮಿ ಸತತಂ ದಶರಥ ತನಯಂ ರಘುಕುಲ ತಿಲಕಂ ಅನುಪಲ್ಲವಿ: ವೀರ ರಾಘವಂ ರಾಜೀವ ನಯನಂ ಜಾನಕಿ ಪ್ರಾಣ ಜಗದಾನಂದಕಾರಕಂ ಚರಣ: ಶ್ರೀ ತ್ಯಾಗರಾಜ ರಾಗನುತಂ ಕಂದರ್ಪ ಕೋಟಿ ಲಾವಣ್ಯ ಸದೃಶಂ ಶ್ರೀಸ್ಕಂದ ಜನಕ ಹೃದಯ ಮಂದಿರಸ್ಥಿತಂ ಸುಗ್ರೀವ ವಾನರ ಹನುಮಾದಿ ಸಂ ಸೇವಿತಂ == ಉಲ್ಲೇಖಗಳು ==